ನಮ್ಕೇರಿ ಆಟ > ಹುಲಿ ಕುರಿ ಆಟ
 
~~~ ಹುಲಿ ಕುರಿ ಆಟ ~~~
 
ಆಟದ ರಚನೆ:
 
ಆಡಲು ಬೇಕಾದ ಸಾಮಾಗ್ರಿಗಳು: ೧೨-೧೬ ಹುಣಸೇ ಬೀಜ (ಕುರಿಗಳಿಗೆ)
೩ ಕಲ್ಲುಗಳು( ಹುಲಿಗಳಿಗೆ)
 
ಒಮ್ಮೆಗೆ ಏಷ್ಟು ಜನ ಆಡಬಹುದು : ಇಬ್ಬರು
 
ಆಡೋದು ಹೇಗೆ:
ತ್ರಿಭುಜಾಕೃತಿಯ ತುದಿಯಲ್ಲಿ ಹುಲಿಗಳನ್ನು (೩ ಕ ಲ್ಲುಗಳು) ಮೇಲ್ಕಂಡ ಚಿತ್ರದಲ್ಲಿ ತೋರಿಸಿದಂತೆ ಇಡುವುದು. ಹಾಗೆಯೆ ಕುರಿಗಳನ್ನು ಉಳಿದ ಜಾಗದಲ್ಲಿ ಇಡುವುದು. ಕುರಿಗಳನ್ನು ಒಂದೊಂದೇ ಮನೆ ನಡೆಸಬೇಕು. ಹುಲಿಗೆ ಕುರಿ ಅಡ್ಡ ಬಂದರೆ ಹುಲಿ ಕುರಿಯನ್ನು ಹಾರಿ ನುಂಗುತ್ತದೆ(ಚಿತ್ರ ದಲ್ಲಿ ತೋರಿಸಿದ ರೀತಿ. ಒಂದು ಸಾರಿಗೆ ಎರಡು ಕುರಿಗಳನ್ನು ನುಂಗಬಹುದು. ಕುರಿಗಳು ಹುಲಿಗೆ ನಡೆಯಲು ಜಾಗವಿಲ್ಲದಂತೆ ಕಟ್ಟಿ ಹಾಕಬೇಕು. ಎಲ್ಲಾ ಕುರಿಗಳನ್ನು ನುಂಗಿದರೆ ಹುಲಿ ಗೆದ್ದಂತೆ. ಹುಲಿಯನ್ನು ಕಟ್ಟಿ ಹಾಕಿದ್ದೇ ಆದರೆ ಕುರಿಗಳು ಗೆದ್ದಂತೆ.
~~~~~~~~~~~~~~~~~~