ಕವನಗಳು>ಬದುಕು
 
|| ಬದುಕು ||
 
ಬದುಕು ಏಳು ಬೀಳಿನ ಆಟ
ಎಲ್ಲಿಯ ತನಕ ಈ ಓಟ?
 
ನಕ್ಕರು ನಕ್ಕ ಹಾಗಿಲ್ಲ
ಅತ್ತರೂ ಅತ್ತ ಹಾಗಿಲ್ಲ
ನನ್ನದಾದರೂ ನಂದಾಗಿಲ್ಲ ಈ ಬದುಕು
 
ನಾನು ನಾನಾಗಿಲ್ಲ
ನಮ್ಮವರು ನಮ್ಮವರಾಗಿಲ್ಲ
ಇದ್ದರೂ ಇಲ್ಲದ ಹಾಗೆ ಈ ಎಲ್ಲಾ ಬದುಕು
 
ಮನದ ಮಾತು ನಂದಾದರು
ನಂದಾಗಿಲ್ಲ ನನ್ನ ಜೀವನ
 
ಬದುಕು ಏಳು ಬೀಳಿನ ಆಟ
ಎಲ್ಲಿಯ ತನಕ ಈ ಓಟ
-ಸುಜಾತ
 
|| ~~~ ||