~~~ ಕನ್ನಡ ಕವಿ ಕೂಟ ~~~
 
ಈ ಪುಟದಲ್ಲಿ ಕನ್ನಡ ಸಾಹಿತ್ಯಲೋಕದ ಹಿಂದಿನ ಹಾಗೂ ಇಂದಿನ ಎಲ್ಲಾ ಕವಿಗಳ, ಸಾಹಿತ್ಯ ಲೋಕಕ್ಕೆ ಸೇವೆ ಸಲ್ಲಿಸಿರುವವರ ಪೂರ್ಣ ಪರಿಚಯ ಇದರಲ್ಲಿ ಅಡಕವಾಗಿರುತ್ತದೆ. ಕನ್ನಡ ಸಾಹಿತ್ಯದಲ್ಲಿನ ವೈವಿಧ್ಯತೆಯನ್ನು ಸೂಚಿಸುವ ಸಲುವಾಗಿ ಕವಿ ಕೂಟವನ್ನು ಇಪ್ಪತ್ತು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ನಿಮಗೆ ಅಂದಿನ ಪಂಪನಿಂದ ಹಿಡಿದು ಇಂದಿನ ಆಧುನಿಕ ಕವಿಗಳವರೆಗೂ ಮಾಹಿತಿ ಲಭ್ಯವಾಗುವಂತೆ ಮಾಡಿದ್ದೇವೆ. ಮೊದಲ ಆವೃತ್ತಿಯಲ್ಲಿ ಕೇವಲ ಕೆಲ ಸಾಹಿತಿಗಳ ಮಾಹಿತಿ ಮಾತ್ರ ನಿಮಗೆ ಲಭ್ಯವಿರುತ್ತದೆ. ಉಳಿದ ಸಾಹಿತಿಗಳ ವಿವರಗಳನ್ನು ಸಧ್ಯದಲ್ಲೇ ಹೊರತರಲಾಗುತ್ತದೆ.
ಇದರೊಂದಿಗೆ ನಾವು ತಯಾರಿಸಿದ ಪಟ್ಟಿಯಲ್ಲಿರುವ ಸಾಹಿತಿಗಳನ್ನು ಆಯಾ ವಿಭಾಗದ ಸಾಹಿತಿಗಳ ಪರಿಚಯವನ್ನು ಸಂಪೂರ್ಣವಾಗಿ ಪಡೆಯಬಹುದಾಗಿದೆ.
ಉದಾ :
ಹಳೆಗನ್ನಡ - ಪಂಪ, ರನ್ನ, . . .
ಕಾದಂಬರಿಕಾರರು - ಅನಕೃ, ತ.ರಾ.ಸು . . .
ಸಂಶೋಧಕರು -ಡಿ. ಎಲ್. ನರಸಿಂಹಾಚಾರ್ಯ, ಎಂ. ಚಿದಾನಂದ ಮೂರ್ತಿ. . .
ಚಿತ್ರಸಾಹಿತಿಗಳು - ಭಾರತೀಸುತ, ಹಂಸಲೇಖ. . .
ಇದರ ಜೊತೆಗೆ ಕವಿ ಕಾವ್ಯನಾಮ, ಕವಿಗಳ ಆತ್ಮ ಚರಿತ್ರೆ, ವಿವಿಧ ಪ್ರಶಸ್ತಿಗಳನ್ನು ಪಡೆದ ಸಾಹಿತಿಗಳ ಪಟ್ಟಿ ಕೂಡ ದೊರೆಯುತ್ತದೆ.
~~~~~~~~~~~~~~~~~~