ಕುಮಾರವ್ಯಾಸ
 
ಸ್ವ-ವಿವರ
 
ಗದುಗಿನ ನಾರಾಯಣಪ್ಪ ಇವನ ಹೆಸರು.
ಗದಗಿನ ಹತ್ತಿರದ ಕೋಳಿವಾಡದ ಶಾನುಭೋಗ ಮನೆತನಕ್ಕೆ ಸೇರಿದವನು.
ಇವನ ಕಾಲ ಕ್ರಿ.ಶ. ೧೧೬೦. ಚಾಮರಸ, ರಾಘವಾಂಕನ ಸಮಕಾಲೀನ.
ಗೋವಿಂದಪೈಗಳ ಪ್ರಕಾರ ಇವನ ಕಾಲ ಕ್ರಿ.ಶ.೧೩೩೦. ಇನ್ನೊಂದು ಮಾಹಿತಿ ಪ್ರಕಾರ ಕ್ರಿ.ಶ.೧೪೩೦.
ಇವನ ಮಹಾಕಾವ್ಯ ಕರ್ಣಾಟ ಭಾರತ ಕಥಾಮಂಜರಿ ಇದಕ್ಕೆ ಕನ್ನಡ ಭಾರತ, ಗದುಗಿನ ಭಾರತ ಎಂಬ ಹೆಸರು ಇದೆ.
ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತು ಪರ್ವಗಳನ್ನು ಕನ್ನಡಕ್ಕೆ ತಂದಿದ್ದಾನೆ. `ದಶಪರ್ವಭಾರತ' ಎಂದು ಕರೆಯುವುದುಂಟು.
ಐರಾವತ ಎಂಬ ಗ್ರಂಥವನ್ನು ಬರೆದಿದ್ದಾನೆಂದು ಕೆಲವರ ಅಭಿಮತ.
'ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು' ಎಂದು ಕುವೆಂಪು ಹೊಗಳಿದ್ದಾರೆ.