ಜಗದ್ದಳ ಸೋಮನಾಥ
 
ಸ್ವ-ವಿವರ
 
ಈತನ ಕಾಲ ಕ್ರಿ.ಶ. ೧೧೫೦.
ಈತನು `ಕರ್ನಾಟಕ ಕಲ್ಯಾಣಕಾರಕ' ಎಂಬ ಒಂದು ವೈದ್ಯಗ್ರಂಥವನ್ನು ರಚಿಸಿದ್ದಾನೆ.
ಇವನಿಗೆ `ವಿಚಿತ್ರ ಕವಿ' ಎಂಬ ಬಿರುದು ಇದೆ.
ಪೂಜ್ಯಪಾದರು ವಿರಚಿಸಿದ ಸಂಸ್ಕೃತ ಗ್ರಂಥಕ್ಕೆ ಕನ್ನಡ ಭಾಷಾಂತರವಾದ `ಕರ್ಣಾಟಕ ಕಲ್ಯಾಣಕಾರಕ'ವು ವೃತ್ತಕಂದಗಳಲ್ಲಿ ರಚಿತವಾಗಿದೆ.
ಇವನು ಶಾಸ್ತ್ರಕಾರನಾದರೂ ಒಳ್ಳೆಯ ಪದವಿನ್ಯಾಸ ಕೌಶಲವನ್ನು ಪಡೆದಿದ್ದ ಸಮರ್ಥಕವಿ.
`ಕರ್ಣಾಟಕ ಕಲ್ಯಾಣಕಾರಕ' ಗ್ರಂಥದಲ್ಲಿ ಎಂಟು ಅಧ್ಯಾಯಗಳಿವೆ. ನಾನಾ ರೋಗಗಳ ಸ್ವರೂಪ, ನಿಧಾನ ಕ್ರಮ ಮತ್ತು ಚಿಕಿತ್ಸಾ ವಿಧಾನಗಳನ್ನು ಕವಿ ಇದರಲ್ಲಿ ಹೇಳಿದ್ದಾನೆ.
ಈ ಕವಿ ಜೈನನಾದ್ದರಿಂದ ಈ ಕೃತಿಯಲ್ಲಿ ಮದ್ಯ, ಮಧು, ಮಾಂಸ ವರ್ಜಿತವಾದ ಔಷಧಿಗಳನ್ನು ಮಾತ್ರ ಹೇಳಿದ್ದಾನೆ. ಅತಿಸಾರ, ಗುಲ್ಮ ರೋಗ ಮೊದಲಾದ ಹಲವು ವ್ಯಾಧಿಗಳ ವಿಷಯವನ್ನು ಸೋಮನಾಥ ವಿಸ್ತಾರವಾಗಿ ನಿರೂಪಿಸಿದ್ದಾನೆ.