ಶಿವಕೋಟಾಚಾರ್ಯ
 
ಸ್ವ-ವಿವರ
ಈತನ ಕಾಲ ಸುಮಾರು ಕ್ರಿ.ಶ. ೯೨೦.
ಜೈನಕವಿ, ವಡ್ಡಾರಾಧನೆ ಎಂಬ ಗದ್ಯಗ್ರಂಥವನ್ನು ರಚಿಸಿದನು.
ಇದು ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ ಮೊದಲ ಗದ್ಯ ಗ್ರಂಥ.
`ವಡ್ಡಾರಾಧನೆ'ಯಲ್ಲಿ ಸುಮಾರು ೧೯ ಮಹಾತ್ಮರ ಜೀವನ ಕಥೆಗಳಿವೆ.
ವಡ್ಡಾರಾಧನೆ ಎಂದರೆ ವೃದ್ಧರ, ಜ್ಞಾನಿಗಳ, ಜೈನಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವುದು.
ವಡ್ಡಾರಾಧನೆಯನ್ನು ನಾನಾ ಬಗೆಯ ಕಥೆಗಳನ್ನು ಉಳ್ಳ ಹಳೆಗನ್ನಡದಲ್ಲಿ ರಚಿತವಾದ ಕಥಾಕೋಶವೆಂದು ಕರೆಯಬಹುದು.