ನೃಪತುಂಗ
 
ಸ್ವ-ವಿವರ
ನೃಪತುಂಗ ರಾಷ್ಟ್ರಕೂಟ ವಂಶದ ರಾಜ.
ಈತನ ಕಾಲದಲ್ಲಿ ಬದಂಡೆ, ಚತ್ರಾಣ ಮುಂತಾದ ಕಾವ್ಯಭೇದಗಳಿದ್ದವು.
ಕನ್ನಡದ ಮೊದಲ ಕಾವ್ಯ ಕವಿರಾಜಮಾರ್ಗವನ್ನು ಈತನೇ ರಚಿಸಿದನೆಂದು ವಿದ್ವಾಂಸರ ಅಭಿಪ್ರಾಯ.
ಕವಿರಾಜಮಾರ್ಗ ಒಂದು ಶಾಸ್ತ್ರಗ್ರಂಥ. ಇದರಲ್ಲಿ ಕಾವ್ಯದೋಷಗಳು, ಅಲಂಕಾರಗಳು ವರ್ಣಿತವಾಗಿದೆ.
ಕಾವೇರಿಯಿಂದ ಗೋದಾವರಿಯವರೆಗೂ ಕನ್ನಡ ನಾಡು ಹರಡಿತ್ತು ಎಂದು ಇದರಲ್ಲಿ ಹೇಳಲಾಗಿದೆ.
ಕವಿರಾಜಮಾರ್ಗದಲ್ಲಿ ನೃಪತುಂಗನಿಗಿಂತಲೂ ಹಿಂದೆ ಇದ್ದ ಅನೇಕ ಕವಿಗಳ ಉಲ್ಲೇಖವಿದೆ.
ನೃಪತುಂಗ ರಾಜನ ಆಸ್ಥಾನದಲ್ಲಿದ್ದ ಶ್ರೀವಿಜಯನೆಂಬ ಕವಿಯಿಂದ `ಕವಿರಾಜಮಾರ್ಗ' ರಚಿತವಾಯಿತು ಎಂಬ ಅಭಿಪ್ರಾಯವು ಪ್ರಚಲಿತವಾಗಿದೆ.