ಎಸ್.ಕೆ. ಕರೀಂ ಖಾನ್
 
ಸ್ವ-ವಿವರ
 
ಕಾವ್ಯನಾಮ : ಕರೀಂ ಖಾನ್
ನಿಜನಾಮ/ಪೂರ್ಣನಾಮ : ಎಸ್.ಕೆ. ಕರೀಂ ಖಾನ್
ಜನನ : ೧೯೦೪.
ಮರಣ : ೨೯ ಜುಲೈ ೨೦೦೬
ತಂದೆ : ರೆಹಮಾನ್ ಖಾನ್.
ತಾಯಿ: ಜಿಹನಾಬಿ
ಜನ್ಮ ಸ್ಥಳ : ಸಕಲೇಶಪುರ, ಹಾಸನಜಿಲ್ಲೆ.
ಮನೆ, ಮನೆತನ : ಹಲಸೂರು, ಬೆಂಗಳೂರು.
 
ವಿದ್ಯಾಭ್ಯಾಸ :
ಪ್ರಾಥಮಿಕ : ಉರ್ದು ಶಾಲೆ, ಸಕಲೇಶಪುರ.
ಪ್ರೌಢಶಾಲೆ : ಹಾಸನದ ಪ್ರೌಢಶಾಲೆ.
ಪದವಿ: ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ.
 
ವೃತ್ತಿ:
ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಏಕೀಕರಣಕ್ಕಾಗಿ ಹೋರಾಡಿದರು.
ನೌಕ ಪಡೆಯಲ್ಲಿ ವೈರ್ ಲೆಸ್ ಟೆಲಿಗ್ರಾಫ್ ಆಗಿದ್ದರು.
ಪತ್ರಕರ್ತರಾಗಿ ಉಡುಪಿಯ 'ಅಂತರಂಗ' ಪತ್ರಿಕೆ ಹಾಗೂ ಧಾರವಾಡದ 'ಲೋಕಮಿತ್ರ' ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.
ಚಿತ್ರಸಾಹಿತಿ ಹಾಗೂ ಸಂಭಾಷಣಕಾರರಾಗಿ ಸೇವೆ ಸಲ್ಲಿಸಿದರು.
 
ಸಾಹಿತ್ಯಕೃತಿಗಳು :
ಕಥಾಸಂಕಲನ : ನಿವಾರ, ನಿಹಾರ.
ಕಾದಂಬರಿ : ಸಮೀರ, ಬಷೀರ, ಬಲಿಗಾನಿ, ಹುಸೇನ್.
ನಾಟಕಗಳು : ನಿರ್ದೋಷಿ, ಮಧು ಮೋಹನ(೩೦೦ಕ್ಕೂ ಅಧಿಕ ಪ್ರದರ್ಶನ ಕಂಡಿದೆ),
ಹಣವೋ ಗುಣವೋ, ಕೃಷ್ಣಲೀಲಾ.
ಮಾಗಡಿ ಕೆಂಪೇಗೌಡ, ಬೆಂಗಳೂರು ಕೆಂಪೇಗೌಡ, ಲೈಲಾ ಮಜ್ನು, ಹುಮಾಯೂನ್.
ಚಿತ್ರ ಸಾಹಿತಿಯಾಗಿ ೨೬ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿದರು, ೨೦೦ ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿದ್ದಾರೆ.
ಜಾನಪದ ಸಂಗ್ರಹಣಾಕಾರರಾಗಿ ಜಾನಪದ ಕಲೆಯ ಬಗ್ಗೆ ೨೪೦ ಗಂಟೆ ವಿಡಿಯೋಚಿತ್ರೀಕರಣ ನಡೆಸಿದರು. ಸೊಗಸಾಗಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರು.
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಸಾವಿರ ಹಾಡುಗಳ ಸರದಾರ, ಜಾನಪದ ಜಂಗಮ.
೧೯೮೫ ರಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದರು.
೧೯೯೫ ರಲ್ಲಿ ಜನಪದ ಶ್ರೀ ಪ್ರಶಸ್ತಿ.
೧೯೯೭ ರಲ್ಲಿ ನಾಡೋಜ ಪ್ರಶಸ್ತಿ.
೧೯೯೮ ರಲ್ಲಿ ಹಂಸರತ್ನ.
೨೦೦೪ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ.
ಜಾನಪದ ಜಂಗಮ, ಚಿತ್ರದುರ್ಗ ಶಿವಮೂರ್ತಿ ಶರಣರ ಪ್ರಶಸ್ತಿ,
ಸ್ವರ್ಣಗೌರಿ ಚಿತ್ರದ ಹಾಡಿಗಾಗಿ ರಾಷ್ಟ್ರಪ್ರಶಸ್ತಿ ಪಡೆದರು.
 
ಕರೀಂ ಖಾನ್ ಕುರಿತು ಪ್ರಕಟಿತ ಪ್ರಮುಖ ಲೇಖನಗಳು, ಹೇಳಿಕೆ/ಹೊಗಳಿಕೆಗಳು:
ಕನ್ನಡ ಸಾಹಿತ್ಯ ಪರಿಷತ್ತಿನ ವಸಂತೋತ್ಸವ ಸಂದರ್ಭದಲ್ಲಿ ಕರೀಂ ಖಾನ್ ರವರು ಜನಪದ ಗೀತೆಗಳನ್ನು ಹಾಡಿ ವೇದಿಕೆಯಿಂದ ಇಳಿಯುತ್ತಿದ್ದಂತೆ 'ನೀವು ಇನ್ನೊಂದೆರಡು ನಿಮಿಷ ಹಾಡಿದ್ದರೆ ನಾನು ಅತ್ತೇ ಬಿಡುತ್ತಿದ್ದೆ' ಎಂದು ಮಾಸ್ತಿಯವರು ಹೇಳಿದರಂತೆ
 
ಕವಿ ಸಂದೇಶ :
ಹತ್ತು ಸಾವಿರ ಪದವ ಎತ್ತಿನ್ಮೇಲ್ಹೇರಿಕೊಂಡು
ಮತ್ತೆ ಸಾವಿರ ಕ್ಕೈಲಿ ಹಿಡಿಕೊಂಡು- ಬಂದಿವ್ನಿ
ಬಾರೊ ಬಸವಣ್ಣ ಬಯಲಿಗೆ
'ಸಂತೇಲಿ ಕಳೆದುಹೋದ ಮಕ್ಕಳನ್ನು ಹುಡುಕಿ ಅವರ ತಂದೆ ತಾಯಿಗಳಿಗೆ ಒಪ್ಪಿಸುವ ರೀತೀಲಿ ನಾನು ಜನಪದ ಸಾಹಿತ್ಯವನ್ನು ಸಂಗ್ರಹಿಸಿ ಸಂಪಾದಿಸುವ ಕೆಲಸ ಮಾಡಿದೆ'