ಹೆಚ್.ಎಲ್. ನಾಗೇಗೌಡ
 
ಸ್ವ-ವಿವರ
 
ಕಾವ್ಯನಾಮ : ಹೆಚ್.ಎಲ್. ನಾಗೇಗೌಡ
ನಿಜನಾಮ/ಪೂರ್ಣನಾಮ : ಹರಗನಹಳ್ಳಿ ನಿಂಗೇಗೌಡ ನಾಗೇಗೌಡ.
ಜನನ : ೦೭ ಡಿಸೆಂಬರ್ ೧೯೧೨.
ಮರಣ : ೨೦೦೫.
ತಂದೆ : ನಿಂಗೇಗೌಡ.
ತಾಯಿ: ಹುಚ್ಚಮ್ಮ ದೇವಿ.
ಜನ್ಮ ಸ್ಥಳ : ಹರಗನಹಳ್ಳಿ,ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ
ಮನೆ,ಮನೆತನ : ದೊಡ್ಡಮನೆ ಕುಟುಂಬ.
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ನಾಗತಿಹಳ್ಳಿ
ಪ್ರೌಢಶಾಲೆ : ಚನ್ನರಾಯಪಟ್ಟಣ
ಕಾಲೇಜು: ಬೆಂಗಳೂರು
ಪದವಿ: ಬಿ.ಎಸ್.ಸಿ-ಮೈಸೂರು ಮಹಾರಾಜ ಕಾಲೇಜು
೧೯೩೯ರಲ್ಲಿ ಎಲ್.ಎಲ್.ಬಿ-ಪೂನ.
೧೯೪೦ರಲ್ಲಿ ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆ.
 
ವೃತ್ತಿ:
೧೩ ವರ್ಷಗಳ ಕಾಲ ವಿವಿಧ ಶ್ರೇಣಿಯ ಹುದ್ದೆಗಳನ್ನು ಅಲಂಕರಿಸಿದರು.
೧೯೬೦ರಲ್ಲಿ ಐ.ಎ.ಎಸ್. ಶ್ರೇಣಿಗೆ ಆಯ್ಕೆಯಾದರು.
೧೯೬೧, ೧೯೬೩ ಹಾಗೂ ೧೯೬೫ರಲ್ಲಿ ಕ್ರಮವಾಗಿ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಡೆಪ್ಯುಟಿ ಕಮೀಷನರಾಗಿ ಸೇವೆ ಸಲ್ಲಿಸಿದರು.
೧೯೬೯ರಲ್ಲಿ ಲೇಬರ್ ಕಮೀಷನರ್ ಆದರು.
೧೯೭೨ರಲ್ಲಿ ಸರ್ವೆ ಇಲಾಖೆಯ ಅಧಿಕಾರಿ ಹಾಗೂ ಎಂಡೋಮೆಂಟ್ ಕಮೀಷನ್ರಾದರು.
೧೯೭೫ರಲ್ಲಿ ರಾಜ್ಯದ ಲೋಕಸೇವಾ ಆಯೋಗದ ಸದಸ್ಯರಾದರು.
'ಜಾನಪದ ಜಗತ್ತು' ಎಂಬ ಏಕೈಕ ಜಾನಪದ ಪತ್ರಿಕೆಯ ಸಂಪಾದಕರಾಗಿದ್ದರು.
'ಜಾನಪದ ಲೋಕ' ಎಂಬ ವಸ್ತು ಸಂಗ್ರಹಾಲಯವುಳ್ಳ ಅದ್ಭುತ ಜಾನಪದ ಲೋಕ ಸೃಷ್ಟಿ ಮಾಡಿದರು.
ರಾಜ್ಯ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ನಾನಾಗುವೆ ಗೀಜನನ ಹಕ್ಕಿ, ಕೆನಿಲ್ ವರ್ತ್,ಪ್ರವಾಸಿ ಕಂಡ ಇಂಡಿಯಾ, ದೊಡ್ಡಮನೆ, ಸೊನ್ನೆಯಿಂದ ಸೊನ್ನೆಗೆ, ಭೂಮಿಗೆ ಬಂದ ಗಂಧರ್ವ, ಬೆಟ್ಟಬಟ್ಟಲಿಗೆ.
ಕಥನಕವನಗಳು: ಕರ್ನಾಟಕ ಜನಪದ ಕಥೆಗಳು,ವೆರಿಯರ್ ಎಲ್ವಿನರ ಗಿರಿಜನ ಪ್ರಪಂಚ,ಕಂದು ಕೇಳಿದ ಕಥೆಗಳು.
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಮುಧೋಳಲ್ಲಿ ನಡೆದ ೬೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :