ಪಾ. ವೆಂ. ಆಚಾರ್ಯ
 
ಸ್ವ-ವಿವರ
 
ಕಾವ್ಯನಾಮ : ಪಾವೆಂ, ಲಾಂಗೂಲಾಚಾರ್ಯ.
ನಿಜನಾಮ/ಪೂರ್ಣನಾಮ : ಪಾಡಿಗಾರ ವೆಂಕಟರಮಣಾಚಾರ್ಯ.
ಜನನ : ೧೯೧೫
ಮರಣ : ೦೪ ಮೇ ೧೯೯೨.
ತಂದೆ : ಲಕ್ಷ್ಮೀರಮಣಾಚಾರ್ಯ
ತಾಯಿ: ಸೀತಮ್ಮ
ಜನ್ಮ ಸ್ಥಳ : ಉಡುಪಿ
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ : ಎಸ್. ಎಸ್. ಎಲ್ .ಸಿ.,ಉಡುಪಿ
ಕಾಲೇಜು:  
 
ವೃತ್ತಿ:
ಎಸ್.ಎಸ್.ಎಲ್.ಸಿ ಆದ ಮೇಲೆ ಶಿಕ್ಷಕರಾಗಿ, ಹೋಟೆಲ್ ಮಾಣಿಯಾಗಿ ದುಡಿದರು
ಕರ್ಮವೀರ ಪತ್ರಿಕೆಯ ಉಪ ಸಂಪಾದಕರಾಗಿ ವಿವಿಧ ಕೆಲಸ ಮಾಡಿದರು.
ಕಸ್ತೂರಿ ಪತ್ರಿಕೆಯ ಸಂಪಾದಕರಾಗಿ ನಿವೃತ್ತಿಯವರೆಗೂ ಸೇವೆ ಸಲ್ಲಿಸಿದರು.
೧೯೩೭ ರಲ್ಲಿ ಉಡುಪಿಯ ಅಂತರಂಗ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ವೃತ್ತಿ ಜೀವನ ಪ್ರಾರಂಭಿಸಿದರು.
೧೯೪೧ ರಲ್ಲಿ ಲೋಕ ಶಿಕ್ಷಣ ಟ್ರಸ್ಟ್ ಬಳಗಕ್ಕೆ ಮುದ್ರಣಾಲಯದ ವ್ಯವಸ್ಥಾಪಕರಾಗಿ ಸೇರಿಕೊಂಡರು.
 
ಸಾಹಿತ್ಯಕೃತಿಗಳು :
ನಗೆಬರಹ : ಪ್ರಹಾರ, ಲೋಕದ ಡೊಂಕು, ವಿಪರೀತ, ವಕ್ರದೃಷ್ಟಿ-
ರಾಜಕೀಯ ಬರಹಗಳು : ರಶಿಯದ ರಾಜ್ಯ ಕ್ರಾಂತಿ (೧೯೪೪), ಸ್ವತಂತ್ರ ಭಾರತದ ೨೫ ವರ್ಷಗಳು
ಕವನ ಸಂಕಲನಗಳು : ನವನೀರದ, ಕೆಲವು ಪದ್ಯಗಳು
ಬಯ್ಯ ಮಲ್ಲಿಗೆ-ತುಳು ಕಾವ್ಯ ಸಂಕಲನ
ವಿಮರ್ಶಾ ಗ್ರಂಥಗಳು : ಪದಾರ್ಥ ಚಿಂತಾಮಣಿ-ಕನ್ನಡ ಪದ ಪರಂಪರೆಯನ್ನು ಪರಾಮರ್ಶಿಸುವ ಗ್ರಂಥ
ಹರಟೆ, ವ್ಯಂಗ್ಯ, ವಿಡಂಬನಾತ್ಮಕ ಪ್ರಬಂಧ ಹಾಗೂ ತುಳು ಭಾಷೆಯಲ್ಲೂ ಕೂಡ ಸಾಹಿತ್ಯ ನಿರ್ಮಾಣ ಮಾಡಿದರು.
ಒಂದೂವರೆ ಸಾವಿರಕ್ಕೂ ಹೆಚ್ಚು ಹಾಸ್ಯ ಲೇಖನವನ್ನು ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೫೪ ರಲ್ಲಿ 'ನವನೀರದ'- ಕವನ ಸಂಕಲನಕ್ಕೆ ಮುಂಬಯಿ ಸರ್ಕಾರದ ಬಹುಮಾನ ಬಂದಿತು.
ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವದ ಪದಕ ಪ್ರಶಸ್ತಿ
ರಾಮಯ್ಯ, ಬಿ ಡಿ. ಗೋಯಾಂಕಾ ಪ್ರಶಸ್ತಿ ಲಭಿಸಿದೆ.
 
ಪಾವೆಂ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
ಪಾವೆಂ ಹೇಳಿದ ಕಥೆಗಳು
 
ಕವಿ ಸಂದೇಶ :