ನಮ್ಕೇರಿ ಆಟ > ಚೌಕಭಾರ
~~~ ಚೌಕಭಾರ ~~~
 
ಆಟದ ರಚನೆ : ೫ ಮನೆ ಆಟ
 
ಆಡಲು ಬೇಕಾದ ಸಾಮಾಗ್ರಿಗಳು: ಹುಣಸೇ ಬೀಜ ,ಕವಡೆ, ಬಳೆ ಚೂರು ,ಅಡಿಕೆ, ಗುಂಡಿಗಳು, ಧಾನ್ಯಗಳು ಹೀಗೆ ಎನು ಬೇಕಾದರೂ ಆದೀತು.
 
ಒಮ್ಮೆಗೆ ಏಷ್ಟು ಜನ ಆಡಬಹುದು : ಕನಿಷ್ಟ ೨ (ಇಬ್ಬರು), ಗರಿಷ್ಟ ೪ (ನಾಲ್ಕು)
 
ಆಡೋದು ಹೇಗೆ:
ಚೌಕಾಕಾರದ ಅಕೃತಿಯಲ್ಲಿ ಇರುವ ರಚನೆಯಲ್ಲಿ x ಗುರುತಿರುವ ಜಾಗವನ್ನು ಘಟ್ಟ ವೆನ್ನುತ್ತಾರೆ. ಅದರಲ್ಲಿ ೫ ಕಾಯಿಗಳನ್ನು ಇಡಬೇಕು. ಪ್ರತಿಯೊಬ್ಬರು ಬೇರೆ ಬೇರೆ ರೀತಿಯ ಕಾಯಿಗಳನ್ನು ಇಡಬೇಕು. ಕವಡೆ ಅಥವಾ ಹುಣಸೆ ಬೀಜ ವನ್ನು ಕೈ ಮೂಲಕ ನೆಲದ ಮೇಲೆ ಹಾಕುವುದು ಅಥವಾ ಬಟ್ಟಲಲ್ಲಿ ಕುಲುಕಿ ಹಾಕುವುದು. ಅದರಲ್ಲಿ ಬಿದ್ದ ಸಂಖ್ಯೆಯಂತೆ ಘಟ್ಟದಿಂದ ಕಾಯಿಗಳನ್ನು ಮುಂದಕ್ಕೆ ನಡೆಸುವುದು. ಹೀಗೆ ನೆಡಸುವುವಾಗ ಎದುರಿಗೆ ಬೇರೆಯವರ ಕಾಯಿ ಸಿಕ್ಕರೆ ಹೊಡೆಯುವುದು. ಹೀಗೆ ಹೊಡಿಸಿಕೊಂಡ ಕಾಯಿ ಅಲ್ಲಿಂದ ತಮ್ಮ ಮನೆಯ ಘಟ್ಟ ಸೇರುತ್ತದೆ. ಪುನ: ಅದು ಅಲ್ಲಿಂದ ಪ್ರಾರಂಭಿಸಬೇಕು.. ಕಾಯಿ ಹೀಗೆ ಎಲ್ಲ ಚೌಕಗಳನ್ನು ದಾಟುತ್ತ ಒಳ ಚೌಕದೊಳಗೆ ಸಾಗಬೇಕು. ಕಾಯಿ ಒಡೆದಿದ್ದರೆ ಮಾತ್ರ ಒಳ ಪ್ರವೇಶ, ಇಲ್ಲದಿದ್ದರೆ ಹೊರಚೌಕವನ್ನು ಕಾಯಿ ಒಡೆಯುವವರೆಗೂ ಸುತ್ತಾ ಕಾಯಬೇಕು. ಒಳ ಚೌಕದ ಸುತ್ತಿನ ಮಧ್ಯ ಭಾಗವನ್ನು ಸೇರಿದರೆ ಕಾಯಿ ಹಣ್ಣಾದಂತೆ ಎಲ್ಲಾ ಕಾಯಿಯನ್ನು ಯಾರು ಬೇಗ ಹಣ್ಣು ಮಾಡುತ್ತಾರೊ ಅವರು ಗೆದ್ದಂತೆ.
ಇದೇ ರೀತಿಯ ಕ್ರಮದಂತೆ ೭ ಮನೆ, ೯ ಮನೆ ಸಾಧ್ಯವಿದ್ದರೆ ೧೧ ಮನೆ ಯ ಆಟವನ್ನು ಆಡಬಹುದು.
 
ಮನೆ ಕವಡೆ ಘರಗಳು ಅಂಗಾತ ಮಗಚಿದರೆ ಬೋರಲು ಬಿದ್ದರೆ
೪, ೮
೬, ೧೨, ೫ ೬, ೫ ೧೨
೮, ೧೬, ೮, ೬ ೧೬
ಘರಗಳು ಅವಶ್ಯಕತೆ ಮೇಲೆ ಅವಲಂಬಿತ ಬದಲಾವಣೆ ಮಾಡಿಕೊಳ್ಳಬಹುದು.
 
ಆಟದ ರಚನೆ : ೭ ಮನೆ ಆಟ
 
೫ ಮನೆ ಆಟದಂತೆ ಇದು ಇದ್ದರೂ ಕೆಲ ಬದಲಾವಣೆಗಳಿವೆ. ಅದನ್ನು ರಚನೆಯಲ್ಲಿ ಗಮನಿಸಬಹುದು. ಇದರಲ್ಲಿ ಕನಿಷ್ಟ ಅಂದರೆ ನಾಲ್ಕು ಜನ, ಗರಿಷ್ಟ ಅಂದರೆ೮ ಜನ ಒಮ್ಮೆಗೆ ಆಡಬಹುದು. ಕಾಯಿ ನಡೆಸುವುದು, ಹೊಡೆಯುವುದು ( ಕೆಲವು ಕಡೆ ಇದಕ್ಕೆ ಕಡಿತ ಅನ್ನುವುದುಂಟು, ನನಗೆ ಇನ್ನೂ ಕಡ್ತ ಸಿಕ್ಕಿಲ್ಲವೆಂದರೆ ಕಾಯಿ ಹೊಡೆದಿಲ್ಲ ಎಂದರ್ಥ.)
 
೫ ಮನೆ ಆಟದ ರೀತಿಯೇ. ಇದರಲ್ಲಿ ಉಪಯೋಗಿಸುವ ಕೆಲ ಪದಗಳ ವಿಶ್ಲೇಷಣೆ ಹೀಗಿದೆ:
ಪೊಳ್ಳು, ಗಟ್ಟಿ (ಜೋಡಿ ಕಾಯಿ) : ೨ ಕಾಯಿಗಳನ್ನು ಒಟ್ಟಿಗೆ ಒಂದೆರಡು ಮನೆ ನಡೆಸಿಕೊಂಡು ಹೋದರೆ ಅದು ಪೊಳ್ಳು ಅನಿಸುತ್ತದೆ. ಇದನ್ನೇ ಮುಂದೆ ಗಟ್ಟಿ ಮಾಡಬಹುದು, ಪೊಳ್ಳು ಮುಂದೆ ಸಾಗುವಾಗ ಸಮ ಸಂಖ್ಯೆಯ ಘರಗಳು ಬಿದ್ದರೆ ೨,೪,೬ ನಡೆಸುವುದು. ನಂತರ ೨ ಬಿದ್ದಾಗ ನಡೆಸಿದರೆ ಅದು ಗಟ್ಟಿ ಯೆನಿಸುತ್ತದೆ
 
ಪೊಳ್ಳು, ಗಟ್ಟಿಕಾಯಿಯನ್ನು ಹೊಡೆಯುವ ರೀತಿ :
ಗಟ್ಟಿಯನ್ನು ಇನ್ನೊಂದು ಗಟ್ಟಿಯೇ ಹೊಡೆಯಲು ಸಾಧ್ಯ.
ಪೊಳ್ಳನ್ನು ಒಂಟಿ ಕಾಯಿ ಹೊಡೆಯಬಹುದು.
ಗಟ್ಟಿಯನ್ನು ಒಂಟಿ ಕಾಯಿ ಹೊಡೆಯುವಂತಿಲ್ಲ.
 
ಗಟ್ಟಿ ಇನ್ನೊಂದು ಕಾಯನ್ನು ಹೊಡೆಯುವುದು ಹೇಗೆ :
ಗಟ್ಟಿ ಇನ್ನೊಂದು ಕಾಯಿಯನ್ನು ಹೊಡೆಯಬೇಕಾದರೆ ಸಮ ಸಂಖ್ಯೆಯ ಘರಗಳು ಬೀಳಬೇಕು. ಒಮ್ಮೆ ಗಟ್ಟಿ ಯಾದರೆ ಅದು ಸಮ ಸಂಖ್ಯೆಯ ಘರ ಬಿದ್ದಾಗ ಮಾತ್ರ ನಡೆಸಬೇಕಾಗುತ್ತದೆ.
Top
 
~~~~~~~~~~~~~~~~~~