1 | 2 | 3 | 4
 
~~~ ಗಾದೆಗಳು 2 ~~~
 
೧೦೧. ಮಾಡಿದ ರಾಗಿ ಕೊಟ್ರೂ ಮೂರ್ಖನ ಸಹವಾಸ ಬೇಡವೆಂದಂತೆ.
೧೦೨. ಲೋಕ ತಿಳೀಬೇಕು ಲೆಕ್ಕ ಕಲೀಬೇಕು.
೧೦೩. ಸಾಲ್ಗಾರ ಸುಮ್ಮನಿದ್ರು ಸಾಕ್ಷಿಗಾರ ಸುಮ್ಮನಿರ.
೧೦೪. ಹಲ್ಲಿರುವ ತನಕ ಊಟ ಕಣ್ಣಿರುವ ತನಕ ನೋಟ.
೧೦೫. ದಕ್ಷಿಣೆಗಾದರೆ ಮಾತು ಹಿಡಿದಾನು, ಮಂತ್ರಕ್ಕಾದರೆ ಬೆನ್ನು ತೋರ್ಸಿಯಾನು.
೧೦೬. ಭಾವಿಸಿದರೆ ಬಳಗ, ಕೂಡಿಸಿದರೆ ಕಾಸು.
೧೦೭. ಭಾಷೆ ಕೊಟ್ಟವನು ಪೋಷಣೆ ಮಾಡನೇ?
೧೦೮. ಭಾಷೆ ತಿಳಿಯದಿದ್ದರೂ ಹಾಸ್ಯಕ್ಕೆ ಕಡಿಮೆಯಿಲ್ಲ.
೧೦೯. ಭಿಕಾರಿಯಾದವ ಕಾಶಿಗೆ ಹೋದರೂ, ಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ?
೧೧೦. ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.
೧೧೧. ಮಳೆ ನೀರನ್ನು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ.
೧೧೨. ದುಡಿಯೋ ತನಕ ಮಡದಿ.
೧೧೩. ದೂರವಿದ್ದ ಮಗನಿಗೂ, ಹತ್ತಿರವಿದ್ದ ಮಗನಿಗೂ ಸರಿಬಾರದು.
೧೧೪. ದೊಂಬರಾಟ ಆಡಬಹುದು ಮಕ್ಕಳಾಟ ಆಡೊಕ್ಕಾಗಲ್ಲ.
೧೧೫. ನನಗೆ ನಿನಗೆ ಹಿತ ಇಲ್ಲ, ನಿನ್ನ ಬಿಟ್ಟು ನನಗೆ ಗತಿ ಇಲ್ಲ ಎಂದಂತೆ.
೧೧೬. ನೆಂಟ್ರು ಮನೆಗೆ ಮೂಲ, ಕುಂಟೆತ್ತು ಹೊಲಕ್ಕೆ ಮೂಲ.
೧೧೭. ನರಗುಂದಕ್ಕೆ ಹೊದರೆ ಕುರು ತಪ್ಪೀತೆ?
೧೧೮. ನಾಮವಿದ್ದವನಿಗೆ ಕಾಮ ಕಡಿಮೆಯೇ?
೧೧೯. ಹಲ್ಲಿ ಶಕುನ ಕೇಳಿ ಕಲ್ಲಿಂದ ಹೊಡೆಸಿಕೊಂಡಂತೆ.
೧೨೦. ಸಾಲಗಾರನ ಹೆಂಡತಿ ಶೋಕಿಮಾಡಿದರೇನು?
೧೨೧. ವೈಕುಂಠಕ್ಕೆ ಹೋಗಲಿಕ್ಕೆ ಕುಂಟು ದಾಸಯ್ಯನ ಮಧ್ಯಸ್ತಿಕೆಯೇ?
೧೨೨. ಮೂರು ಕಾಸಿನ ಮಾಂಸವಿಲ್ಲದಿದ್ದರೂ, ಮಾತು ಮಾತ್ರ ಜೋರು.
೧೨೩. ರೊಕ್ಕ ಕೊಟ್ಟು ರಟ್ಟೆ ಮುರಿಸಿಕೊಂಡಂತೆ.
೧೨೪. ಜಾತಿ ನೀತಿಯಿಲ್ಲ, ಮಾರಿಗೆ ಕರುಣೆ ಇಲ್ಲ.
೧೨೫. ಹೂಡಿದರೆ ಒಲೆ, ಮಡಿದರೆ ಮನೆ.
೧೨೬. ಹತ್ತು ಜನರ ಹುಲ್ಲು ಕಡ್ಡಿ ಒಬ್ಬನಿಗೆ ತಲೆ ಹೊರೆ.
೧೨೭. ಪಂಗಡವಾದವ ಸಂಗಡ ಬಂದಾನೆ?
೧೨೮. ಅಗ್ನಿಗೆ ತಂಪುಂಟೆ, ವಿಷಕ್ಕೆ ರುಚಿಯುಂಟೆ, ದಾರಿಕೋರನಿಗೆ ಧರ್ಮವುಂಟೆ?
೧೨೯. ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ.
೧೩೦. ತುಪ್ಪ ತಿಂದ ಮಾತಿಗಷ್ಟು ತಪ್ಪು ಮಾತು ಬಂತು.
೧೩೧. ತೇರಾದ ಮೇಲೆ ಜಾತ್ರೆ ಸೇರಿತು.
೧೩೨. ಆಸೆಗೆ ತಕ್ಕ ಪರಿಶ್ರಮ ಬೇಕು.
೧೩೩. ಎಲ್ಲರಿಗೂ ಹಿಡಿಸುವ ಸಂಪ್ರದಾಯ ಯಾವುದೂ ಇಲ್ಲ.
೧೩೪. ಏನಾದರೂ ಆಗು ಮೊದಲು ಮಾನವನಾಗು.
೧೩೫. ಬಕ್ಕಳ ಹೊನ್ನಿದ್ದರೆ ಊರೆಲ್ಲಾ ನೆಂಟರು.
೧೩೬. ಕಷ್ಟಗಳು ಹೇಳದೆ ಕೇಳದೆ ಬರೋ ನೆಂಟರ ಹಾಗೆ.
೧೩೭. ಕರ್ಪೂರವ ತಿಪ್ಪೇಲಿಟ್ರೂ ತನ್ನ ಸುವಾಸನೆ ಬಿಡದು.
೧೩೮. ಗಣೇಶನ್ನ ಮಾಡು ಅಂದ್ರೆ ಅವರ ಅಪ್ಪನ ಮಾಡಿದನಂತೆ.
೧೩೯. ಜ್ಞಾನಿ ಬಂದರೆ ಗೌರವಿಸು, ಹೀನ ಬಂದರೆ ತ್ಯಜಿಸು.
೧೪೦. ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
೧೪೧. ಟೊಳ್ಳು ಮಾತು ಸುಳ್ಳಿಗಿಂತ ಕಡೆ.
೧೪೨. ಠಕ್ಕು ಇರುವವನಿಗೆ ಠಿಕಾಣಿ ಸಿಗದು.
೧೪೩. ತೂಕ ಸರಿಯಿದ್ದರೆ ವ್ಯಾಪಾರ.
೧೪೪. ನಡೆದಷ್ಟು ನೆಲ, ಪಡೆದಷ್ಟು ಫಲ.
೧೪೫. ಮುಳ್ಳು ಬಿತ್ತಿದವನಿಗೆ ನೀನು ಹೂಬಿತ್ತು.
೧೪೬. ಪುಷ್ಪ ಡೊಂಕಾದರೇನು, ಪರಿಮಳ ಡೊಂಕೇ?
೧೪೭. ಬುದ್ಧಿಯಿಲ್ಲದವನ ಐಶ್ವರ್ಯ, ಕಡಿವಾಣ ಇಲ್ಲದ ಕುದುರೆಯಂತೆ.
೧೪೮. ರಸ್ತೇಲಿ ಕುತ್ಕೊಂಡು ಗಳಗಳನೆ ಅತ್ತರೆ ಹೋದ ಪ್ರಾಯ ಬಂದೀತೆ?
೧೪೯. ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.
೧೫೦. ಸಂತೋಷವೇ ಯೌವನ, ಚಿಂತೆಯೇ ಮುಪ್ಪು.
೧೫೧. ಹಸಿದವರ ಮುಂದೆ ಭಾಷಣ ಮಾಡಿದ ಹಾಗೆ.
೧೫೨. ಹಳೆಯ ಕೋಟು ಧರಿಸಿ, ಹೊಸ ಪುಸ್ತಕ ಕೊಳ್ಳಿ.
೧೫೩. ಊಟಕ್ಕೆ ಮೊದಲು ಉಪ್ಪಿನ ಕಾಯಿ, ಮಾತಿಗೆ ಮೊದಲು ಗಾದೆ.
೧೫೪. ಆರಿದ್ರೆ ಮಳೆಯಲ್ಲಿ ಆದವನೇ ಒಡೆಯ.
೧೫೫. ಸ್ವಾತಿ ಮಳೆ ಬಿದ್ರೆ ಮುತ್ತಿನಂಥ ಜೋಳ.
೧೫೬. ಕುಲ ಬಿಟ್ಟರೂ ಛಲ ಬಿಡಬೇಡ.
೧೫೭. ಹೊಸ ಮಂಜು ಹಳೆಯದನ್ನು ಕೊಚ್ಚದಿದ್ದೀತೆ.
೧೫೮. ಕೆಟ್ಟದಲ್ಲದ ಮೇಲೆ ಪಿಸುಗುಟ್ಟೋದು ಯಾಕೆ?
೧೫೯. ಇಬ್ಬರು ಒಪ್ತಾರೆ ಮೂವರು ವಿರೋಧಿಸುತ್ತಾರೆ ಎಂದಂತೆ!
೧೬೦. ಮನೇಲಿ ಕತ್ತಲೆ, ಪರರಿಗೆ ದೀಪ ದಾನ ಮಾಡಿದ.
೧೬೧. ಇರೋದು ಕಲಿಸುತ್ತೆ, ಇಲ್ಲದ್ದು ನಾಚಿಸುತ್ತೆ.
೧೬೨. ಒಬ್ಬನ ಗಡ್ಡಕ್ಕೆ ಬೆಂಕಿ ಹತ್ತಿದಾಗ, ಮತ್ತೊಬ್ಬ ಕೈ ಕಾಯಿಸಿದ.
೧೬೩. ಮನೆಯೊಡತಿ ಮುಖದ ಮೇಲೆ ಉಗುಳಿದರೂ ಹೊರಗೆ ಬಂದು ನಾನು ಬೆವತಿದ್ದೇನೆ ಅಂದಂತೆ!
೧೬೪. ಹುಲಿ ಹಸಿದಾಗ ಹುಲ್ಲು ತಿಂದೀತೆ?
೧೬೫. ಕುದುರೆ ಕುರುಡಾದರೂ ಕಡಿಮೆಯೇನೂ ತಿನ್ನುವುದಿಲ್ಲ!
೧೬೬. ದುರುಳನಿಂದಲೇ ದುರುಳುತನ.
೧೬೭. ಅಕಾಲದಲ್ಲಿ ಬೆಳೆಯಿದ್ದಂತೆ ವೃದ್ಧಾಪ್ಯದಲ್ಲಿ ಮಕ್ಕಳು.
೧೬೮. ನೆಂಟರನ್ನು ಲಕ್ಷಿಸದಿರಲು, ಸ್ನೇಹಿತರನ್ನು ಅಲಕ್ಷಿಸದಿರು.
೧೬೯. ಕಸದಲ್ಲಿ ಮಲಗಿ ಅರಮನೆ ಕನಸು ಕಂಡಂತೆ.
೧೭೦. ಮಧ್ಯಾಹ್ನದ ಊಟವಾದಮೇಲೆ ಮುಳ್ಳಿನ ಮೇಲಾದರೂ ಮಲಗು, ರಾತ್ರಿ ಊಟವಾದ ಮೇಲೆ ಅರ್ಧ ಮೈಲಿ ನಡೆ.
೧೭೧. ಹುಟ್ಟಿನಿಂದಲೇ ವಕ್ರವಾದದ್ದು, ಪೋಷಣೆಯ ಮೂಲಕ ಸರಿಯಾದಂತೆ.
೧೭೨. ಬಾವಿಯ ಬಾಯನ್ನು ಮುಚ್ಚಬಹುದು, ಜನಗಳ ಬಾಯನ್ನಲ್ಲ.
೧೭೩. ಆಳವಿಲ್ಲದ ನೀರು ಭಾರಿ ಶಬ್ದ ಮಾಡೀತು.
೧೭೪. ತನ್ನ ಯಂತ್ರಕ್ಕೆ ಎಣ್ಣೆ ಹಾಕಲೂ ಆಗದವ ಇನ್ನೊಬ್ಬರಿಗೆ ಉಪದೇಶ ನೀಡಿದಂತೆ.
೧೭೫. ಪಾದಕ್ಕೆ ತಕ್ಕಂತೆ ಚಪ್ಪಲಿ ತಗೊ, ಬಾಗಿಲಿನೆತ್ತರಕ್ಕೆ ತಕ್ಕಂತೆ ಬಗ್ಗಿ ನಡಿ.
೧೭೬. ಮನೆಯ ಕಷ್ಟಕ್ಕೆ ನೆರೆಮನೆಯವರು ಹೊಣೆ ಏನು?
೧೭೭. ಮನೆಯ ಬಾಗಿಲಿಗೆ ಬೀಗ ಹಾಕಿಕೋ, ಮನದ ಬಾಗಿಲನ್ನು ತೆರೆದಿಡು.
೧೭೮. ನಗುವೇ ಆರೋಗ್ಯದ ಗುಟ್ಟು.
೧೭೯. ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನು, ರೋಗವನ್ನು ದೂರವಿಡು.
೧೮೦. ಬೆಕ್ಕು ನಮ್ಮನೇದು, ಹಾಲು ಪಕ್ಕದ ಮನೇದು.
೧೮೧. ಕಹಿ ಪದಾರ್ಥ ತಿಂದು ಸಿಹಿ ಮಾತನಾಡು.
೧೮೨. ಮುಖ ನೋಡಿ ಮನ ತಿಳಿ.
೧೮೩. ಮಾತು ಚಿಕ್ಕದಾಗಿರಲಿ, ಕೆಲಸ ಚೊಕ್ಕವಾಗಿರಲಿ.
೧೮೪. ಮಾತು ಮೊಳದುದ್ದ, ಕೆಲಸ ಕಿರುಬೆರಳುದ್ದ.
೧೮೫. ಮನೆ, ಮನ ಓಡೆದರೆ ಅಂಟಿಸಲಾಗದ ಕನ್ನಡಿಯಂತೆ.
೧೮೬. ಕೋಪ ಕೆಲಸ ಕೆಡಿಸುತ್ತೆ, ಶಾಂತಿ ಮುಂದೆ ನಡೆಸುತ್ತೆ.
೧೮೭. ಮನುಜನಾಗಿ ಹುಟ್ಟಿ ಪಶುವಿನಂತೆ ಬದುಕಿದಂತೆ!
೧೮೮. ಕಳೆದ ದಿನಗಳು ಬರೆದ ಪುಟಗಳಂತೆ.
೧೮೯. ಪರಿಚಿತರ ಮರೆಯಬೇಡ, ಅಪರಿಚಿತರ ನಂಬಬೇಡ.
೧೯೦. ಹಲ್ಲಿಲ್ಲದಿದ್ದರೂ ಚಕ್ಕುಲಿ ತಿನ್ನೋ ಚಪಲ.
೧೯೧. ಒಗ್ಗಿದರೆ ಮನೆಯಾದರೇನು, ಸ್ಮಶಾನವಾದರೇನು?
೧೯೨. ಕೆಡುವವರು ಮನೇಲಿದ್ರು ಕೆಡುತ್ತಾರೆ.
೧೯೩. ನಮ್ಮಬುದ್ಧಿ ಪರರ ಕೈಯಲ್ಲಿದ್ದಂತೆ.
೧೯೪. ಮೆತ್ತಗಿದ್ರೆ ತುಳೀತಾರೆ, ಜೋರಾಗಿದ್ರೆ ಹೆದ್ರತಾರೆ.
೧೯೫. ನೋಡಿ ನಡೆದಾಗ ಎಡವೋದು ತಪ್ಪುತ್ತೆ.
೧೯೬. ತೀರ್ಥ ಎಂದು ಎಲ್ಲೆಲ್ಲೋ ನೀರು ಕುಡಿದಂತೆ!
೧೯೭. ಹಳೇ ಚಪ್ಪಲಿ ಆದ್ರೂ ಪರವಾಗಿಲ್ಲ, ಬರಿಗಾಲಲ್ಲಿ ನಡೀಬೇಡ.
೧೯೮. ರೈತನ ಮುಗ್ಗು ನಾಡಿನ ಕುಗ್ಗು.
೧೯೯. ದರಿದ್ರ ಏಳಗೊಡುವುದಿಲ್ಲ, ಆಲಸ್ಯ ಉಣಗೊಡುವುದಿಲ್ಲ.
೨೦೦. ನಾಚಿಕೆ ಬಿಟ್ಟವ ಊರಿಗೇ ದೊಡ್ಡವ.
Top
~~~~~~~~~~~~~~~~~~