1 | 2 | 3 | 4
 
~~~ ಗಾದೆಗಳು 3 ~~~
 
೨೦೧. ಎರೆ-ತೆರೆ ಬಂಗಾರ, ಮರಳು ಬರೀ ಸಿಂಗಾರ!
೨೦೨. ಹತ್ತೋಕ್ ಮೊದ್ಲು ಕುದರೆ ನೋಡು, ಬಿತ್ತೊಕ್ ಮೊದ್ಲು ಹೊಲ ನೋಡು.
೨೦೩. ಅಶ್ವಿನೀ ಸಸ್ಯನಾಶಿನೀ.
೨೦೪. ಭರಣಿ ಮಳೆ ಧರಣಿ ಬೆಳೆ.
೨೦೫. ರೋಹಿಣಿ ಮಳೆ ಓಣಿಯೆಲ್ಲಾ ಕೆಸರು.
೨೦೬. ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
೨೦೭. ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ!
೨೦೮. ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ.
೨೦೯. ಸ್ವಾತಿ ಮಳೆ ಮುತ್ತಿನ ಬೆಳೆ.
೨೧೦. ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
೨೧೧. ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.
೨೧೨. ಚಿತ್ತಾ ಮಳೆ ವಿಚಿತ್ರ ಬೆಳೆ!
೨೧೩. ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.
೨೧೪. ಬಾಡಿಗೆ ಎತ್ತು ಅಂತ ಹೊಡಿದು ಬಡಿಬಾರದು.
೨೧೫. ಆಕಳಿಲ್ಲದವ ಬೆಳೆಸು ಮಾಡ್ಯಾನ, ಆಕಳಿದ್ದವ ಮಕ್ಕಳ ಸಾಕ್ಯಾನ.
೨೧೬. ಉಣಬೇಕು- ಉಡಬೇಕು ಎಂಬೋದಾದ್ರೆ ಎಮ್ಮೆ ಕಟ್ಟಬೇಕು.
೨೧೭. ಬಾಳೆ ಬೆಳೆದವ ಬಾಳಿಯಾನು.
೨೧೮. ತೆಂಗು ಬೆಳೆದವನಿಗೂ ಗಂಡು ಹೆಡೆದವಳಿಗೂ ಚಿಂತೆಯಿಲ್ಲ.
೨೧೯. ತೋಟ ಮಾಡಿದವನಿಗೆ ಕೋಟಲೆಯಿಲ್ಲ.
೨೨೦. ಬಲ್ಲಿದವನಿಗೆ ಕಬ್ಬು.
೨೨೧. ಆದರೆ ಒಂದಡಿಕೆ ಮರ, ಹೋದರೆ ಒಂದು ಗೋಟು.
೨೨೨. ತಂದೆ, ತಾಯಿ ಸತ್ತರೂ ಸೋದರ ಮಾವ ಇರಬೇಕು.
೨೨೩. ವಿದ್ಯಾವಂತನಾದರೆ ಜಗತ್ತಿನ ಆಡಳಿತವನ್ನೇ ನಡೆಸಬಹುದು.
೨೨೪. ಪರಿಸರ ಮಾಲಿನ್ಯ ವಿನಾಶಕ್ಕೆ ಕಾರಣ.
೨೨೫. ದೇಹಕ್ಕೆ ಮುಪ್ಪಾದರೇನಾಯ್ತು, ಅಧ್ಯಯನಕ್ಕೆ ಮುಪ್ಪಿದೆಯೇ?
೨೨೬. ಶರಣು ಆದವನಿಗೆ ಮರಣವಿಲ್ಲ.
೨೨೭. ಜಾಣನಿಗೆ ಮೂರು ದಾರಿ, ಕೋಣನಿಗೆ ಒಂದೇ ದಾರಿ.
೨೨೮. ಗುರುವಿಲ್ಲದೇ ಮಠವಿಲ್ಲ, ಹಿರಿಯರಿಲ್ಲದೆ ಮನೆಯಿಲ್ಲ.
೨೨೯. ಮನೆ ಗೆದ್ದು ಮಾರು ಗೆಲ್ಲು.
೨೩೦. ಮಾತು ಅಂಗಾರ ಮೌನ ಬಂಗಾರ
೨೩೧. ಗುರಿಯಿಟ್ಟು ಗುಂಡು ಹಾಕು, ಸಮಯ ಸಾಧಿಸಿ ಬೇಟೆಯಾಡು.
೨೩೨. ಮನೆಯಲ್ಲಿ ರಾಮಣ್ಣನಂತೆ, ಬೀದಿಯಲ್ಲಿ ಕಾಮಣ್ಣನಂತೆ.
೨೩೩. ಕೆಟ್ಟದ್ದನ್ನು ಬಯಸಬೇಡ, ಒಳ್ಳೆಯದನ್ನು ಬಿಡಬೇಡ.
೨೩೪. ಮಾನವನಾದ ಮೇಲೆ ಮೂರು ಆಕ್ಷರ ಮೊದಲು ಕಲಿ.
೨೩೫. ಒಲೆಯಮೇಲೆ ಇಟ್ಟಾಗ ಉಕ್ಕಿದಂತೆ ಹಾಲು, ಒಗ್ಗಟ್ಟಿಲ್ಲದ ಮನೆ ಬೀದಿಪಾಲು.
೨೩೬. ಬಾಲ್ಯವಿಲ್ಲದೆ ಯೌವ್ವನವಿಲ್ಲ, ಯೌವ್ವನವಿಲ್ಲದೆ ಮುಪ್ಪಿಲ್ಲ.
೨೩೭. ದಯವಿಲ್ಲದ ಧರ್ಮವಿಲ್ಲ.
೨೩೮. ಮಾತಿಗೆ ನೆಲೆಯಿಲ್ಲ, ಪ್ರೇಮಕ್ಕೆ ಬೆಲೆಯಿಲ್ಲ.
೨೩೯. ಕೋಣನಿಗೆ ಏನು ಗೊತ್ತು ಲತ್ತೆ ಪೆಟ್ಟು.
೨೪೦. ಆಸೆಯಿಲ್ಲದವನು ದೇಶಕ್ಕೆ ಶ್ರೀಮಂತ.
೨೪೧. ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡ, ಚಾಡಿಹೇಳಿ ಜಗಳ ಹಚ್ಚಬೇಡ.
೨೪೨. ಕೋಣನಾಗಿರುವುದಕ್ಕಿಂತ ಜಾಣನಾಗಿರುವುದು ಲೇಸು.
೨೪೩. ಗೆಳೆತನದಲ್ಲಿ ಮೋಸಮಾಡಬೇಡ.
೨೪೪. ಬಾಯಿಯಲ್ಲಿ ಬೆಲ್ಲ ಎದೆಯಲ್ಲಿ ನೀಚತನ.
೨೪೫. ಹಿಮಾಲಯದಲ್ಲಿ ಹಿಮ ಹೆಚ್ಚಂತೆ, ವೀರಭದ್ರನಲ್ಲಿ ಅವತಾರ ಹೆಚ್ಚಂತೆ.
೨೪೬. ಕಾಯಕವನ್ನು ಸದಾ ಮಾಡು, ಸೋಮಾರಿತನವನ್ನು ಬಿಡು.
೨೪೭. ಮೈತುಂಬ ಕಣ್ಣಿರಲಿ, ಕೈಯಲ್ಲಿ ಪೆನ್ನಿರಲಿ.
೨೪೮. ಹಿರಿಯರ ಮಾತಿಗೆ ಕಿವಿಗೊಡು, ಚುಚ್ಚುಮಾತಿಗೆ ಬೆನ್ನು ಕೊಡು.
೨೪೯. ವಿನಯದಿಂದ ವಿಶ್ವವನ್ನು ಗೆಲ್ಲು, ಪರನಿಂದೆ ಮಹಾಪಾಪ.
೨೫೦. ಮೊದಲು ಕಣ್ಣು ಬಿಡು, ನಂತರ ಕೈ ಮಾಡು.
೨೫೧. ನಿನ್ನಿಂದ ಆದ ಪಾಪ, ಅದೇ ನಿನಗೆ ಶಾಪ.
೨೫೨. ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ, ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ.
೨೫೩. ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ.
೨೫೪. ಯಾದವೇಂದ್ರ ದನ ಕಾದ, ರಾಘವೇಂದ್ರ ರಾಜ್ಯವಾಳಿದ.
೨೫೫. ಹಟ್ಟಿ ತುಂಬಾ ಹಸು, ಹಾಲು ಮಾತ್ರ ತುಸು.
೨೫೬. ಹಾಲು ಕುಡಿದು ಹಾಗಲಕಾಯಿ ತಿಂದಂತೆ.
೨೫೭. ಹುಲಿಗಲ್ಲ, ಸಿಂಹಕ್ಕಲ್ಲ, ಮನೆಯ ಹೆಂಡತಿಯ ನೆರಳಿಗಂಜಿದ.
೨೫೮. ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರುವುದನ್ನು ಬಿಟ್ಟೀತೆ?
೨೫೯. ಏನು ಬೇಡಿದರೊಬ್ಬ ದಾನಿಯನ್ನು ಬೇಡು, ದೀನನಾ ಬೇಡಿದರೆ ಆ ದೀನ ಏನು ಕೊಟ್ಟಾನು?
೨೬೦. ಇತ್ತಿತ್ತ ಬಾ ಎಂದರೆ ಹೆಗಲೇರಿ ಕುಳಿತ.
೨೬೧. ಹಣದಲ್ಲಿ ಬಡವನಾದರೂ ಬುದ್ಧಿಯಲ್ಲಿ ಬಡವನಾಗಬಾರದು.
೨೬೨. ಹಣವಿಲ್ಲದ ಮನುಷ್ಯ, ರೆಕ್ಕೆ ಇಲ್ಲದ ಪಕ್ಷಿಯಂತೆ.
೨೬೩. ಹಡಗಿನ ವ್ಯಾಪರ, ಉಪ್ಪಿಗೆ ಬಡತನ.
೨೬೪. ಬುದ್ಧಿಗಳ್ಳನಿಗೆಲ್ಲಿ ಸತ್ಯ, ಸದಾಚಾರ!
೨೬೫. ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.
೨೬೬. ಸತ್ತವರಿಗೆ ಸಂಗವಿಲ್ಲ, ಕೆಟ್ಟವರಿಗೆ ನೆಂಟರಿಲ್ಲ.
೨೬೭. ನಿದ್ದೆಗೆ ಮದ್ದಿಲ್ಲ, ವಜ್ರಕ್ಕೆ ಬೆಲೆಯಿಲ್ಲ.
೨೬೮. ಮನೆ ಮಕ್ಕಳು ಮಾಣಿಕ್ಯ, ನೆರೆಮನೆ ಮಕ್ಕಳು ಕಸಿವಿಸಿ.
೨೬೯. ಹೆಣ್ಮಕ್ಕಳಿಗೆ ತಾಯಿ ಶಿಕ್ಷೆ,, ಗಂಡ್ಮಕ್ಕಳ್ಳಿಗೆ ತಂದೆ ಶಿಕ್ಷೆ.
೨೭೦. ಮುಖಕ್ಕೆ ಮೂಗು ಚೆಂದ, ಮೂಗಿಗೆ ಮೇಲೆರಡು ಕಣ್ಣು ಚೆಂದ.
೨೭೧. ವಯಸ್ಸಿಗೆ ತಕ್ಕ ಬುದ್ಧಿ ಕಲಿ.
೨೭೨. ಕಾಲಿದ್ದವನಿಗೆ ಆಟ, ಕಣ್ಣಿದ್ದವನಿಗೆ ನೋಟ.
೨೭೩. ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ.
೨೭೪. ಆಸೆ ಆಸ್ತಿ ಮಾಡ್ತು, ದುರಾಸೆ ನಾಶ ಮಾಡ್ತು.
೨೭೫. ಅಪಕೀರ್ತಿ ತರುವ ಮಗನಿಗಿಂತ, ಸತ್ಕೀರ್ತಿ ತರುವ ಆಳೇ ಮೇಲು.
೨೭೬. ಕೊಟ್ಟು ಕೆಟ್ಟವರಿಲ್ಲ, ತಿಂದು ಬದುಕಿದವರಿಲ್ಲ.
೨೭೭. ಸಮಯಕ್ಕೆ ಬಾರದ ಬುದ್ಧಿ, ಸಾವಿರ ಇದ್ದರು ಲದ್ದಿ,
೨೭೮. ಹೊರಗೆ ಝಗ ಝಗ, ಒಳಗೆ ಭಗ ಭಗ.
೨೭೯. ಕಲ್ಲಾದರು ಕರಗಬಹುದು, ಕಪಟಿಯ ಮನಸ್ಸು ಕರಗದು.
೨೮೦. ಮೂಕವೇದನೆಯು ಸತ್ಯಕ್ಕಿಂತ ಮೇಲು.
೨೮೧. ಕೃತಿಯಿಲ್ಲದ ಮಾತು, ಕಸ ಬೆಳೆದ ತೋಟವಿದ್ದಂತೆ.
೨೮೨. ಒಳ್ಳೆಯ ಕೆಲಸಕ್ಕೆ ವಿಘ್ನ ಹೆಚ್ಚು.
೨೮೩. ಲೆಕ್ಕಕ್ಕಿಂತ ಹೆಚ್ಚು ಹೊರಬಾರದು, ಲೆಕ್ಕಕ್ಕಿಂತ ಹೆಚ್ಚು ದೂರೆಬಾರದು.
೨೮೪. ಅರ್ಧ ಕಲಿತವನ ಆಬ್ಬರ ಹೆಚ್ಚು.
೨೮೫. ದೇಶ ತಿರುಗಬೇಕು, ಭಾಷೆ ಕಲಿಯಬೇಕು.
೨೮೬. ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ.
೨೮೭. ಅಲ್ಪರ ಸಂಗ ಅಭಿಮಾನ ಭಂಗ.
೨೮೮. ಸಂಕೋಚ ಮಾಡಿದರೆ ಸಂಕಪಾಷಾಣವೂ ಸಿಗದು.
೨೮೯. ಬಾವಿ ತೋಡದೆ ನೀರು ಸಿಗದು, ಪ್ರಯತ್ನ ಮಾಡದೆ ಫಲ ಸಿಗದು.
೨೯೦. ಪಡಿತಿಂದು ಗುಡಿಯಲ್ಲಿ ಉರುಳಾಡಿದ.
೨೯೧. ನೋಡಿ ನಡೆದವನಿಗೆ ಕೇಡಿಲ್ಲ.
೨೯೨. ಪದವೂ ಮುಗಿಯಿತು, ತಂತಿಯೂ ಹರಿಯಿತು.
೨೯೩. ಪದವಿ ಬಂದ ಬಳಿಕ ಮದವೂ ಬರತಕ್ಕದ್ದೆ.
೨೯೪. ಪಾಪಕ್ಕೆ ಹೆದರು, ತಾಪಕ್ಕೆ ಹೆದರದಿರು.
೨೯೫. ಪುಷ್ಪವಿಲ್ಲದ ಪೂಜೆ, ಅಶ್ವವಿಲ್ಲದ ಅರಸನಿಗೆ ಸಮ.
೨೯೬. ಮಗ ಸಣ್ಣವನಾದರೂ, ಮಾತು ಸಣ್ಣದಲ್ಲ.
೨೯೭. ಮಂತ್ರ ಸ್ವಲ್ಪ, ಉಗುಳೇ ಬಹಳ.
೨೯೮. ಮಾನ ಹೋದ ಮೇಲೆ ಮರಣ ಬಂದ ಹಾಗೆ.
೨೯೯. ಬೆಲ್ಲವಿದ್ದಲ್ಲಿ ನೊಣ, ಕೆಂಡವಿದ್ದಲ್ಲಿ ಕಾವು.
೩೦೦. ಬೇಕಾದ ಮಾತು, ಬೆಲ್ಲಕ್ಕಿಂತ ಸವಿ.
Top
~~~~~~~~~~~~~~~~~~