~~~ ಜಾನಪದ ಜಗತ್ತು ~~~
 
ಈ ವಿಭಾಗದಲ್ಲಿ ಸಮಗ್ರ ಗ್ರಾಮೀಣ ಪರಿಸರವನ್ನು ಪರಿಚಯಿಸುವುದು ನಮ್ಮ ಉದ್ದೇಶ. ಇದರ ಉಪವಿಭಾಗವಾಗಿ ನಮ್ಮೂರೇ ನಮಗೆ ಅಂದ, ನಮ್ ಕೇರಿ ಆಟ, ನಮ್ ಮನೆಯಾಗೈತೆ ನೋಡಿ, ನೋಡು ಬಾ ಈ ಊರ.
 
ನಮ್ಮೂರೇ ನಮಗೆ ಅಂದ - ಹೆಸರೇ ಸೂಚಿಸುವಂತೆ ಪ್ರತಿಯೊಬ್ಬರಲ್ಲಿ ತಮ್ಮ ಹುಟ್ಟೂರನ್ನು ನೆನೆಯುವಂತೆ ಮಾಡುವ ಪ್ರಯತ್ನ. ತಮ್ಮ ಹುಟ್ಟೂರಿನ ಪರಿಸರ ಅದರ ವೈಶಿಷ್ಟ್ಯ, ಸ್ಥಾನಮಾನಗಳನ್ನು ತಿಳಿಸಲು ಸಿದ್ಧವಾದ ವೇದಿಕೆ. ಅದಕ್ಕೆ ಹೊಂದಿಕೊಂಡತೆ ಇರುವ 'ನಮ್ ಕೇರಿ ಆಟ' ಗ್ರಾಮೀಣ ಪರಿಸರದಲ್ಲಿ ಆಡಲಾಗುವ ಒಳಾಂಗಣ- ಹೊರಾಂಗಣ ಆಟಗಳ ಪರಿಚಯಿಸುವ ವಿಭಾಗ ' ನಮ್ ಮನೆಯಾಗೈತೆ... ನೋಡಿ' - ಇದು ಹಳೆಯ ವಸ್ತುಗಳನ್ನು ಹುಡುಕುವ ಪ್ರಯತ್ನ ಉದಾ : ಮೇಟಿ, ಹಳೆ ಕಾಲದ ಕಪಾಟುಗಳು, ಅಡ ಕತ್ತರಿಗಳು, ಕಸೂತಿ ಕಲೆಯ ವಸ್ತುಗಳು..ಇತ್ಯಾದಿ. 'ನಮ್ಮೂರ ಹೆಸರೇ ಅಂದ' ಇದೊಂದು ವಿಶ್ಲೇಷಣಾತ್ಮಕ ಲೇಖಗಳಿಗಾಗಿ ಮೀಸಲಾದ್ದು ಇದರಲ್ಲಿ ಆಯಾ ಊರಿನ ಹೆಸರಿನ ಬಗ್ಗೆ ಪ್ರಚಲಿತ ಇರುವ ವಿಷಯಗಳು ಹಾಗೂ ಆ ಊರಿಗೆ ಆ ಹೆಸರು ಏಕೆ ಬಂತು ಎಂಬುದನ್ನು ಒಳಗೊಂಡಿರುತ್ತದೆ. ಇನ್ನೂ ಅನೇಕ ಜನಪದ ಸಂಗ್ರಹಣೆಗಳು ಕಾಲದ ಅಡಿಯಲ್ಲಿ ಸಿಲುಕಿ ಅವುಗಳ ಬಳಕೆ ಕಮ್ಮಿಯಾಗಿದ್ದರೂ ಅದನ್ನು ಜನತೆಗೆ ಪರಿಚಯಿಸುವುದು ನಮ್ಮ ಉದ್ದೇಶ.
'ನೋಡು ಬಾ ಈ ಊರ' -ಇದು ಕರ್ನಾಟಕದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಸಲುವಾಗಿ ಇರುವ ವಿಭಾಗ.
 
 
 
 
 
 
 
 
~~~~~~~~~~~~~~~~~~