ಕವನಗಳು>ಸಂಜೆ
 
|| ಸಂಜೆ ||
 
ಸೊಗಸಾದ ಸಂಜೆ ಒಂದು ನಿನ್ನೊಡನೆ ಕಳೆದಿದ್ದೆ
ಚೆಲುವೆ ನೂರೆಂಟು ಚಿಂತೆಯ ನೀ ಮರೆಸಿದ್ದೆ.
 
ಚಿಲಿ ಪಿಲಿ ಹಕ್ಕಿಗಳು ಗೂಡಿನೆಡೆಗೆ ಹಾರುತಿರಲು
ಕೆಂಪು ಬಣ್ಣದ ಚಿತ್ತಾರವು ಆಗಸವ ಏರುತಿರಲು
ಆ ಏಕಾಂತದಲಿ ಪ್ರೇಮದ ಹಾಡು ಕೇಳಿಬರಲು
ಮನವು ಸಂತಸದಿ ಕನಸಿನ ಲೋಕವ ಸೇರಿತು.
 
ಬೇರೆ ಯಾರೂ ಇರಲಿಲ್ಲ ನಮ್ಮ ನಡುವೆ
ಸಂತಸದಿ ಏನೂ ತೋಚದೆ ಸುಮ್ಮನೆ ಮಾತನಾಡಿದೆ
ಮನ ತುಂಬಿ ಬಂದಾಗ ನಿನ್ನ ಕೈಹಿಡಿದೆ
ಮೈ ಮನವು ರೋಮಾಂಚನವಾಯಿತು ಅಂದು ಆ ಸಂಜೆ.
 
ನಿನ್ನ ಮನದಾಸೆಯು ನಾಚಿಕೆಯಿಂದ ಮೌನದ ಸೆರೆಯಾಗಿತ್ತು
ಕೆನ್ನೆ ಕೆಂಪಾಗಿ ಪ್ರೇಮದ ಬಯಲು ಮಾಡಿತ್ತು
ಎಲ್ಲವುದಕ್ಕೂ ನನಗೆ ಸಮ್ಮತಿಯ ನೀಡಿತು
ಹೀಗೆ ನಿಲ್ಲಬಾರದೆ ಈ ಸಂಜೆ ಎಂದಿತು ಮನವು.
- ಹರ್ಷ
 
|| ~~~ ||