ಕವನಗಳು>ಸಂಜೆ
 
|| ಅನ್ನದಾತ ||
 
ಸಂತೋಷವಾಗಿರಬೇಕು ರೈತ
ಅವನಲ್ಲವೇ ನಮ್ಮ ಅನ್ನದಾತ
ಹಾಡುತ್ತವೆ ಹೊಗಳುತ್ತೇವೆ
ನೀ ನಮ್ಮ ದೇಶದ ಬೆನ್ನೆಲೆಂಬೆಂದು ಅವನನ್ನು
ನೋಡಿ ನಲಿಯುತ್ತೇವೆ
 
ಭೂ ತಾಯಿಗೆ
ಅವನುಡಿಸಿದ ಹಸಿರು ಸೀರೆಯನ್ನು
ಆದರೆ ಮಳೆರಾಯನಿಗೆ
ಅವನ ಮೇಲೇಕೆ ಕೋಪ...?
ನೊಂದಿದ್ದಾನೆ ಏನೂ ಅರಿಯದ ರೈತ ಪಾಪ..!
 
ಆಸರೆಗಾಗಿ ಯಮರಾಜನ ಕದ ತಟ್ಟುತ್ತಿದ್ದಾನೆ
"ಅನ್ನದಾತ ಸುಖಿಭವೋ"ಎಂದು ಹರಸುವ ನಾವು
ಅವನು ನೋವಿನಿಂದ ಕೂಗಿದಾಗ ಎಲ್ಲಿದ್ದೆವು..?
ಕಾಡು ಕಡಿದು ನಾಡು ಮಾಡಿದೆವು ನಾವು
ಆಧುನಿಕ ಯುಗದಲ್ಲಿ ಮೈ ಮರೆತೆವು.
ಪರಿಣಾಮ ..?
 
ಭೂ ತಾಯಿ ಕಂಗೆಟ್ಟಳು ಬಿಸಿಲ ಧಗೆಯಲ್ಲಿ...!
ರೈತ ನಡೆದ ಸಾವಿನ ದಾರಿಯಲ್ಲಿ...!!
ನಮಗೂ ಕೂಡ ಬಹುದೂರವಿಲ್ಲ
ಆ ಕಾಲ ನೆನಪಿರಲಿ!!
ಇನ್ನಾದರೂ ಎಚ್ಚೆತ್ತುಕೊಳ್ಳಿ ಓ ನವ ನಾಗರಿಕರೇ
ಕಾಡು ಉಳಿಸಿ ಭೂತಾಯಿ ಮನವ ಒಲಿಸಿ
- ವಾಣಿಶ್ರೀ ಬ. ತೊಗ್ಗಿ
 
|| ~~~ ||