ಚುಟುಕಗಳು > ಶ್ವೇತಾರವರ ಚುಟುಕಗಳು
 
- ಕ್ಷಮೆ-
 
ಪ್ರತಿ ಕ್ಷಣವು ನಿನ್ನ ಮೊಗದ ಮೇಲೆ
ನಗುವ ಬಯಸುತ್ತಿರುವೆ.
ನೀ ಜೀವವಾಗಿರಲು
ನಿನಗೆ ನೋವ ಕೊಡಲು ಬಯಸುವೆನೆ
ಅರಿಯದೆ ಆದ ತಪ್ಪಿಗೆ
ಕ್ಷಮೆ ಇರಲಿ ನನಗೆ
----
 
- ಧ್ಯಾನ -
ದಿನವೂ ನಿನ್ನದೇ ಧ್ಯಾನ
ಕನಸಲ್ಲೂ ನಿನ್ನೊಡನೆ ಯಾನ
ಜೊತೆ ನೀ ಇರಲು ಬದುಕು ಸುಲಭ ಪ್ರಯಾಣ
ನೀ ಇಲ್ಲದಿರೆ ಬದಕು ನರಕ ಯಾತನ
----
 
- ಬೆಂಗಳೂರು ಜೀವನ -
ಇಲ್ಲಿ ಜನರ ಬದುಕಿನಲ್ಲಿ ದಿನವೂ ನಿಲ್ಲದ ಬಿರುಸಿನ ಓಟ
ನಡೆಯುತ್ತಿದೆ ಬದುಕಿನ ಓಟ
ಇರುವುದನ್ನು ಬಿಟ್ಟು ಇಲ್ಲದಿರುವುದರತ್ತ ಇವರ ನೋಟ
ಎತ್ತ ನೋಡಿದರತ್ತ ಕಾಂಕ್ರೀಟ್ ಕಟ್ಟಡದ ಕೂಟ
ಅಕ್ಕ ಪಕ್ಕದವರ ಅರಿವೇ ಇಲ್ಲದ ಬದುಕಿನ ಆಟ
ನಿಂತೊಮ್ಮೆ ನಾ ಕೇಳಿದೆ ಒಬ್ಬನನ್ನು
ಅಯ್ಯಾ, ಇದೆಂತಹ ಆಟ
ಹೇಳಿದವನು ಮೇಡಂ ಇದೆ
ಮೆಟ್ರೋಪಾಲಿಟನ್ ಸಿಟಿಯ ಅಬ್ಬರದ ಆಟ
----
 
- ಮರಳಿ ಬಾ -
ನಿನ್ನ ಜೊತೆ ಕೂಡಿ ಕಳೆದ ಆ ಕ್ಷಣ
ಮರಳಿ ಮರಳಿ ಕಾಡುತಿದೆ ಎಲ್ಲಿ ಹೋದರಲ್ಲಿ ನನ್ನ
ಮತ್ತೆ ನಿನ್ನ ಕಾಣುವ ತವಕ ಹೆಚ್ಚುತ್ತಿದೆ ಅನುದಿನ
ಸಾಕು ಇನ್ನು ಈ ಯಾತನೆ ಸೇರು ಬಾ ನನ್ನ
---
 
- ಶುಭ- ಆಶಯ -
ನಡೆಯುತ್ತಿರಲಿ ನಿನ್ನ ಪ್ರತಿ ಹೆಜ್ಜೆ ಸಾಧನೆಯ ಕಡೆ
ಸಿಗಲಿ ಯಶಸ್ಸು ಹಿಡಿದ ಎಲ್ಲಾ ಕೆಲಸದಿ ಹೀಗೆ
ಛಲ ಬಿಡದೆ ಎಲ್ಲಾ ಅಡಚಣೆ ಹಾದು ಬಂದೆ
ಶುಭಾಶಯ ಹೇಳಲು ಬಯಸುತ್ತಿದೆ
ನನ್ನ ಮನ ನಿನಗೆ
---
 
-ಶ್ವೇತಾ
Top
 
--------