MainMenu
 
 
 

ಕನ್ನಡಕವಿ.ಕಾಂ ತಾಣಕ್ಕೆ ಏಳರ ಸಂಭ್ರಮ

ಕನ್ನಡನಾಡು ನುಡಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾ ಕನ್ನಡ ಭಾಷೆ ಹಾಗು ಸಂಸ್ಕೃತಿಯ ಬಗ್ಗೆ ಎಲ್ಲರಲ್ಲಿ ಅಭಿಮಾನ ಉಂಟಾಗಲಿ ಎಂಬ ಉದ್ದೇಶದಿಂದ ನಮ್ಮ ತಂಡ "ಕನ್ನಡ ಕವಿ ಬಳಗ" ಕನ್ನಡ ಸಾಹಿತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಸಲುವಾಗಿ "ಕನ್ನಡ ಕವಿ" (www.kannadakavi.com) ಎಂಬ ಅಂತರ್ಜಾಲ ತಾಣ ಲೋಕಾರ್ಪಣೆಗೊಂಡು ಮಾ.17ಕ್ಕೆ 7 ವರ್ಷ ಕಳೆದಿದೆ.

ಈಗ ಹೊಸ ವಿನ್ಯಾಸದಲ್ಲಿ ಯುನಿಕೋಡ್ ಆವೃತ್ತಿಯಲ್ಲಿ ಓದುಗರ ಸಮಕ್ಷಮಕ್ಕೆ ಇಡಲಾಗುತ್ತಿದೆ. ಈಗಾಗಲೇ ಅನೇಕ ಸಹೃದಯ ವೀಕ್ಷಕರು, ಕನ್ನಡಕವಿ ತಾಣಕ್ಕೆ ಭೇಟಿ ಕೊಟ್ಟು ಅಗತ್ಯ ಸಲಹೆ ಸೂಚನೆ, ಬೆಂಬಲವನ್ನು ನೀಡಿ ನಮ್ಮನ್ನು ಹುರಿದುಂಬಿಸಿದ್ದಾರೆ ಅವರೆಲ್ಲರಿಗೂ ಕನ್ನಡಕವಿ ಬಳಗದ ಅನಂತಾನಂತ ವಂದನೆಗಳು.


###***###

ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ
ಮನುಜರಿಗೆ ಸೊಗಮೀವ ಕರ್ತವ್ಯವೊಂದೆ
ನಿನ್ನದೆಂದರಿಯದಿರು ; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವುವು
-ಕುವೆಂಪು

ಅರಿಕೆ
ಕನ್ನಡ ಸಾಹಿತಿಗಳ ಚಿತ್ರ ಸಂಗ್ರಹ ಕಾರ್ಯವು ಸಾಗಿದೆ. ಸದ್ಯಕ್ಕೆ ಕೆಲವು ಚಿತ್ರಗಳನ್ನು ಚಿತ್ರಸಂಪುಟ(ಗ್ಯಾಲರಿಗೆ) http://kannadakavi.com/gallery3/index.php ದಲ್ಲಿ ಸೇರಿಸಲಾಗಿದೆ. ಆಸಕ್ತರು ಕವಿಗಳು, ಸಾಹಿತ್ಯ ಸಮ್ಮೇಳನ, ಹಾಗೂ ಜಾನಪದ ಕಲೆಗೆ ಸಂಬಂಧಪಟ್ಟ ಯಾವುದೇ ಚಿತ್ರಗಳನ್ನು ಕಳಿಸಿಕೊಡಬಹುದಾಗಿದೆ. ಈ ಸಂಗ್ರಹ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
 
ಸಾಹಿತಿಗಳ ತಾಣದ ಬಗ್ಗೆ ಒಂದಿಷ್ಟು ಮಾತು:
ಕನ್ನಡ ಸಾಹಿತ್ಯವನ್ನು ಇಪ್ಪತ್ತಕ್ಕೂ ಹೆಚ್ಚು ವಿಭಾಗಗಳನ್ನಾಗಿ ಮಾಡಿ ಸಾಹಿತ್ಯದ ವೈವಿಧ್ಯತೆಯನ್ನು ಪರಿಚಯಿಸುವುದರ ಜೊತೆಗೆ ಜಾನಪದ, ಕನ್ನಡದಲ್ಲಿ ಶುಭಾಶಯಪತ್ರ, ಹಳೆ ನೆನಪುಗಳನ್ನು ಸವಿಯುವಂತೆ ಮಾಡುವ ಸಿಹಿ-ಕಹಿ ನೆನಪು, ಗಣ್ಯರ ವಿಳಾಸಗಳು, ಯುವ ಸಾಹಿತಿಗಳಿಗಾಗಿ ಅಂಕಣಗಳು, ಹಿರಿಯರ ಬೋಧನೆಗಳು, ಚರ್ಚೆ ಇತ್ಯಾದಿಗಳನ್ನು ನಮ್ಮ ಅಂತರ್ಜಾಲ ತಾಣವು ಒಳಗೊಂಡಿರುತ್ತದೆ.

ಈ ನಿಟ್ಟಿನಲ್ಲಿ ಯುವ ಬರಹಗಾರಿಗೆ ಇಲ್ಲಿದೆ ಸದಾವಕಾಶ. ಕನ್ನಡ ನಾಡು, ನುಡಿಯ ಬಗ್ಗೆ, ನಿಮ್ಮ ಊರು, ಜನ-ಜಾತ್ರೆ, ವಿಜ್ಞಾನ ಮತ್ತು ಪರಿಸರದ ಬಗ್ಗೆ ನಮಗೆ ಲೇಖನಗಳನ್ನು ಬರೆದು ಕಳುಹಿಸಿ. ಹಾಗೆಯೇ ಯುವ ಚಿತ್ರಕಾರರು, ಛಾಯಾಚಿತ್ರಕಾರರು ತಾವು ತೆಗೆದ ಚಿತ್ರಗಳನ್ನು ನಮಗೆ ಒದಗಿಸಿದರೆ ಅದಕ್ಕೆ ಅಗತ್ಯ ಮೆರಗನ್ನು ನೀಡಿ ಶುಭಾಶಯ ಪತ್ರದ ರೀತಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕೆಂದಿದ್ದೇವೆ.
 
ಹಿರಿಯ ಸಾಹಿತಿಗಳ ಜೊತೆಗಿನ ಸಂದರ್ಶನ, ಸಂವಾದವಿರುತ್ತದೆ, ಸಾಹಿತ್ಯದ ಬಗೆಗಿನ ಪ್ರಶ್ನೆಗಳಿಗೆ ತಜ್ಞರಿಂದ ಸೂಕ್ತ ಉತ್ತರ ದೊರೆಯುವಂತೆ ಮಾಡುವ ಉದ್ದೇಶವೂ ಇದೆ
 
ಈ ಎಲ್ಲದರ ಉದ್ದೇಶ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ತನ್ಮೂಲಕ ಕನ್ನಡದ ಹಿರಿಯರನ್ನು ನೆನೆದು ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಹೆಚ್ಚಿಸುವುದು.
 
ಈ ನಮ್ಮ ಸಾಹಿತ್ಯ ಆಂದೋಲನಕ್ಕೆ ನಮ್ಮೊಡನೆ ಕೈಜೋಡಿಸಲು, ಸಲಹೆ ಸೂಚನೆಗಳನ್ನು ನೀಡಲು ಇಚ್ಚಿಸುವವರನ್ನು ಕನ್ನಡ ಕವಿ ಬಳಗ ಆತ್ಮೀಯವಾಗಿ ಸ್ವಾಗತಿಸುತ್ತದೆ. ಜ್ಞಾನವಾಹಿನಿ ನಿರಂತರವಾಗಿ ಹರಿಯುತ್ತಿರಲಿ.
 
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕನ್ನಡ ಕವಿ ಬಳಗ: 99010 00833.
E mail : kavivichara@gmail.com
Facebook : kannada kavi balaga
 
 
ವಂದನೆಗಳೊಂದಿಗೆ
ಕನ್ನಡ ಕವಿ ಬಳಗ